ಸಜ್ಜನ್ ರಾವ್ ದೇವಸ್ಥಾನ ದಕ್ಷಿಣ ಬೆಂಗಳೂರಿನ, ವಿಶ್ವೇಶ್ವರಪುರಂ ಸರ್ಕಲ್,' ವಿಶ್ವೇಶ್ವರ ಪುರಂ, ಸಜ್ಜನ್ ರಾವ್ ಸರ್ಕಲ್ ಇತ್ಯಾದಿ ಹತ್ತಿರ ಇದೆ. ಇದು ಬೆಂಗಳೂರಿನ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಆ ದೇವಸ್ಥಾನದ ಅಧಿದೈವ ಸುಬ್ರಹ್ಮಣ್ಯ ಸ್ವಾಮಿ ಯೆಂದು ತಿಳಿದು ಬರುತ್ತದೆ. ಸಜ್ಜನರಾವ್ ಎಂಬುವವರು ಕಟ್ಟಿಸಿದ್ದರಿಂದ ಎಲ್ಲರೂ ಅದನ್ನು ಸಜ್ಜನ್ ರಾವ್ ದೇವಸ್ಥಾನ ವೆಂದೇ ಕರೆಯುತ್ತಾರೆ. ಇಲ್ಲಿ ಅತ್ಯಂತ ವಿಧಿಪೂರ್ವಕವಾಗಿ ದೇವರ ಪೂಜೆ-ಪುನಸ್ಕಾರ, ಜಪ-ತಪಾದಿಗಳು ನಡೆಯುತ್ತವೆ. ಬೆಂಗಳೂರಿನ ಹೆಸರುವಾಸಿಯಾದ ವಿ.ಬಿ.ಬೇಕರಿ ಕೂಡ ಈ ದೇವಸ್ಥಾನದ ಹತ್ತಿರದಲ್ಲೇ ಇದೆ. ಕೋಟ ಕಾಮಾಕ್ಷಯ್ಯನವರ ಛತ್ರ, ನ್ಯಾಷನಲ್ ಕಾಲೇಜ್, ರಾಮಕೃಷ್ಣ ಸ್ಟೂಡೆಂಟ್ಸ್ ಹೋಮ್, ಬೆಂಗಳೂರು ಮೆಡಿಕಲ್ ಕಾಲೇಜ್, ಒಕ್ಕಲಿಗರ ಸಂಘ ಹಾಸ್ಟೆಲ್, ಬೆಂಗಳೂರು ಗಾಯನ ಸಮಾಜ, 'ಮಾಧ್ವ ಸಂಘ,' ಇಲ್ಲಿಂದ ನಡೆದು ಹೋಗುವಷ್ಟು ಸಮೀಪದಲ್ಲಿವೆ. ಸುಪ್ರಸಿದ್ಧ 'ಲಾಲ್ ಬಾಗ್' ಉದ್ಯಾನವನ, ಇಲ್ಲಿಂದ ತೀರ ಹತ್ತಿರ. 'ಬಸವನಗುಡಿ ಪೋಸ್ಟ್ ಆಫೀಸ್', 'ಗಾಂಧಿಬಝಾರ್', 'ಇಂಡಿಯನ್ ಇನ್ ಸ್ಟಿ ಟ್ಯೂಟ್ ಆಪ್ಹ್ ವರ್ಲ್ಶ್ ಕಲ್ಚರ್', 'ಕೃಷ್ಣರಾವ್ ಪಾರ್ಕ್,'ಗೆ ಕೂಡ ನಡೆದು ಹೋಗುವಷ್ಟು ಹತ್ತಿರ. == ಉಲ್ಲೇಖಗಳು ==